Kannada Sampada
People & Blogs
“ಕನ್ನಡ ಸಂಪದ” ಇದು ಕಲಿಕೆಯ ಆಗರ. ಸಂಪದವೆಂದರೆ, ಸಂಪತ್ತು. ಕನ್ನಡ ಸಾಹಿತ್ಯದ ಸಂಪತ್ತನ್ನು ಗಳಿಸುವ ಮಾರ್ಗ. ಪದವಿ ಪೂರ್ವ ಹಂತದಲ್ಲಿ ಮಾತೃಭಾಷೆಯನ್ನು ಒಂದು ವಿಷಯವನ್ನಾಗಿ ಆಯ್ಕೆ ಮಾಡಿಕೊಂಡು ಓದುವ ಮಕ್ಕಳಿಗೆ ಸುಲಭವೂ, ಸರಳವೂ, ಸುಲಲಿತವೂ ಆದ ರೀತಿಯಲ್ಲಿ ಮಾರ್ಗದರ್ಶನ ನೀಡುವುದು. ಭಾಷೆಯನ್ನು ಒಂದು ವಿಷಯವನ್ನಾಗಿ ತೆಗೆದುಕೊಂಡು ಶ್ರಮವಹಿಸಿ ಓದುವ ವಿದ್ಯಾರ್ಥಿಗಳಿಗೆ ಈ ಬಗೆಯ ವಿಡಿಯೋಗಳು ಸಹಾಯವಾದರೆ ನಮ್ಮ ಶ್ರಮ ಸಾರ್ಥಕವಾಗುತ್ತದೆ. ಅಲ್ಲದೆ ಸಾಹಿತ್ಯ ಸಂಪದ ಚಾನಲ್‍ನ ಉದ್ದೇಶವೂ ನೆರವೇರಿದಂತಾಗುತ್ತದೆ. ಸಮಸ್ತ ವಿದ್ಯಾರ್ಥಿ ವೃಂದದವರು ಈ ಮಾಧ್ಯಮದ ಮೂಲಕ ಉತ್ತಮ ಜ್ಞಾನಾರ್ಜನೆಯ ಜೊತೆಗೆ, ಹೆಚ್ಚು ಅಂಕಗಳನ್ನು ಗಳಿಸಿ, ಉನ್ನತ ಶ್ರೇಣಿಯೊಂದಿಗೆ ಯಶಸ್ಸನ್ನು ಪಡೆಯಲಿ ಎಂದು ಹಾರೈಸುತ್ತೇನೆ. Email : [email protected]